ಭಾರತಾಂಬೆ ಯಾವ ವೇಷ
ಕಷ್ಟಸಾದ್ಯ ನಿನ್ನ ಆವೇಶ
ಭರಿಸಲಾರೆವು ನಿನ್ನ ರೋಷ
ಕರುಣೆ ಇರಲಿ ನಿನ್ನ ದೇಶ
ಯಂತ್ರ, ತಂತ್ರ, ಮಂತ್ರ ಮಾಟ
ಮುಗಿದ ಮುಕ್ತ ಮನದ ಆಟ
ಹಣದ ಹೊಳೆಯ ಅಟ್ಟಹಾಸ
ಮರೀಚಿಕೆಯೋ ಮಂದಹಾಸ
ಮುರಿದ ಬಂಧ ಮೂಕ ವನವು
ಧಗ ಧಗನೆ ಉರಿವ ಜಗವು
ಹರಿವ ಮನವ ಬಿಗಿದು ಕಟ್ಟು
ದಣಿದ ದೇಹ ಸಡಿಲ ಬಿಟ್ಟು
ಮಣಿದು ನಿನಗೆ ಕೈಯ ಮುಗಿದು
ಇರುವ ಮೂರು ದಿನವು ಕುಣಿದು
ಪ್ರಕೃತಿವಿತ್ತ ವರವ ನಾವೆಲ್ಲ ಸವಿದು
ವರ್ಗ, ವರ್ಣ ಭೇದಗಳೆಲ್ಲ ಮುರಿದು
No comments:
Post a Comment