ಸೂರ್ಯ ಕಿರಣ ಸ್ಪರ್ಶಕೆ
ಕಣ್ತೆರೆದವೆಲ್ಲ ಮೆಲ್ಲಮೆಲ್ಲಗೆ
ರೆಕ್ಕೆ ಪುಕ್ಕಗಳೆಲ್ಲ ಕೆದರಿ
ಗೂಡು ಬಿಡುವ ತಯಾರಿ
ನಿಶಬ್ದ ಗಾಢ ನಿದ್ರೆಯಿಂದ
ಶಪಿಸಿ ಶಪಿಸಿ ಬೇಸರದಿ
ಮತ್ತೆ ಹಸಿವ ನೆನಪಿಗೆ
ಮತ್ತೆ ಅವಸರ ಕಾಡಿಗೆ
ಚಿತ್ರಕಲೆ, ವಿಚಿತ್ರ ಬಲೆ
ಈ ನಿತ್ಯ ಕದನ ನಿಗೂಢ
ಕಾಣದಿಲ್ಲಿ ಶತ್ರು ಸೈನ್ಯ
ಸುಳಿವಿಲ್ಲದ ಸುಳಿಗೆ ಸಿಲುಕಿ
ಅಸ್ಪಷ್ಟದ ಅಬ್ಬರಕ್ಕೆ ತತ್ತರಿಸಿ
ಕುರುಡು ಹುಡುಕಾಟ ತ್ಯಜಿಸಿ
ಅರಿತೆ ಇದುವೆ ನರಕ, ನಾಕ
ಪಡೆದ ಶೂನ್ಯ ಪರಮ ಸುಖ
No comments:
Post a Comment