ಮುಚ್ಚಿ-ಮುಚ್ಚಿ ಮರುಳಾಗ ಬೇಡ
ಬಿಚ್ಚಿ-ಬಿಚ್ಚಿ ನೀ ಹಗುರಾಗ ಬೇಡ
ಬಿಚ್ಚಿ-ಮುಚ್ಚಿ ಮಧ್ಯಕೆ ಸೂಕ್ಷ್ಮ ಗೆರೆ
ಎಳೆಯುವವರಿರಲು ನಮಗಾಸರೆ
ಕುತೂಹಲ ಕೆರಳಿಸಲು ನಿರಂತರ
ಆಸಕ್ತಿ ಮೂಡುವುದು ಸಹಜವದರ
ಹಿಡಿದಿಟ್ಟು ಮನವ ನೋಯಿಸುವರ
ಕಟ್ಟೆ ಹೊಡೆಯಲು ನಷ್ಟ ಅಪಾರ
ಇರಲು ನೂರು ಕಣ್ಣುಗಳ ಕಟ್ಟೆಚ್ಚರ
ಜೊತೆಗೆ ತಂತ್ರ ಮಂತ್ರಗಳ ಆಗರ
ಹಲವಾರು ಯೋಜನೆಗಳ ಸಾಗರ
ಗುರಿ ತಪ್ಪಿ ಕೊಡಬಹುದು ನಿರುತ್ತರ
ಕನಿಕರವಿರದ ಕಾಣದಿಹ ಕೇಡುಗರು
ಕೊಳೆತಿರುವ ಮನೋವಿಕಾರದವರು
ಅವರ ಮನದ ಮನೆಯೊಳಗಿರುವರು
ಎಲ್ಲ ನಿರೀಕ್ಷೆಗಳ ಹುಸಿಯಾಗಿಸುವರು
ಒಳ ಹೊರ ಜಗದರಿವು ಅತ್ಯವಸರ
ನೈಜ ಕನ್ನಡಿಯ ಹಿಡಿದು ನೀ ಆಪ್ತರ
ಬೆಸೆದ ಸ್ನೇಹ ಮನ-ಮನೆಯು ಸುಂದರ
ಮೀರಿ ಘಟಿಸುವುದಕೆ ಅವನೇ ಉತ್ತರ
No comments:
Post a Comment