Feb 24, 2008

ಶೂನ್ಯ

ದೂರದ ಬೆಟ್ಟ ಕಂಡರೂ ನುಣ್ಣಗೆ
ಹತ್ತಿರ ಹೋದರೆ ಏರುವುದೆತ್ತರಕೆ
ಆದರೂ ಬೇಡವೋ ಹಿಂಜರಿಕೆ
ದಿಟ ಒಪ್ಪಿರಲೆಮಗೆ ಭಯವೇಕೆ

ಇರಲಿ ಕಾದ ಕಲ್ಲು, ಚುಚ್ಚುವ ಮುಳ್ಳು
ಬರಲಿ ನೂರು ವಿಷದ ಜಂತುಗಳು
ಜಿಗಿಯಲಿ ಮೇಲೆ ಕ್ರೂರ ಮೃಗಗಳು
ಜೊತೆಗೆ ಕಾದಾಡುವ ರಣ ಹದ್ದುಗಳು

ಗಾಢ ಆತ್ಮಸ್ಥೈರ್ಯ ನಮ್ಮಲಿರಲು
ಖಂಡಿತ ಸಿಗುವುದು ಅಲ್ಲಲ್ಲಿ ನೆರಳು
ಹಸಿವ ನೀಗಲು ಕಾಯಿ ಬೇರುಗಳು
ಬತ್ತಿದ ಬಾಯಿಗೆ ಸಾಕಷ್ಟು ನೀರು

ಪಳಗಿಸು ನೀ ಚಂಚಲ ಮನವನು
ಕಂಡುಕೊಂಡು ನಿರ್ದಿಷ್ಟ ಗುರಿಯನು
ಜೊತೆಗೆ ಸ್ಪಷ್ಟ ಹಾದಿಯ ಅರಿವಿರಲು
ಬೇರೇನು ಬೇಕು ಮುನ್ನಡೆಯಲು

ಬಂದಾಗ ಶೂನ್ಯ, ಹೊರಟಾಗ ಶೂನ್ಯ
ಅನುಭವದ ಸ್ನೇಹದಿ ಬಲ ಬರುವುದು
ಕೇವಲ ಪಯಣ ನಮಗುಳಿದಿರುವುದು
ಈ ಸತ್ಯವ ಅರಿತರೆ ಬೇಸರವಿರದು

ಕಲಿತ ಜ್ಞಾನದಿ ನೀ ಬೆಳಗು ಜಗವನು
ಗಳಿಸಿದ ಧನದಿಂದ ಜನರಿಗೆ ನೆರವನು
ಹಸಿದು ಬಂದವರಿಗೆ ತುತ್ತು ಅನ್ನವನು
ನಮ್ಮ ಆತ್ಮಸಂತುಷ್ಟಿಗೆ ಬೇರೆ ಬೇಕೇನು

No comments: