ದೇವೇ ಗೌಡರ ಷಡ್ಯಂತ್ರ
ಒಳ ಮೀಸಲಾತಿಯ ಮಂತ್ರ
ಇತರ ಹಿಂದುಳಿದ ಜಾತಿಗಳ
ಹೊಡೆಯುವ ಏಕೈಕ ಕುತಂತ್ರ
ಪರಿಶಿಷ್ಟ ಜಾತಿಗಳನು ಹಾಗು
ಪರಿಶಿಷ್ಟ ಪಂಗಡದವರನು
ಅಲ್ಪ ಸಂಖ್ಯಾತರೆಲ್ಲರನ್ನೂ
ಅಲ್ಲೇ ಕಟ್ಟಿ ಹಾಕುವ ತಂತ್ರ
ಅಹಿಂದ ಚಳುವಳಿಗೆ ಏಕೆ ಮಂಕು
ಸಿದ್ದರಾಮಯ್ಯರಿಗೆ ಒಂದೇ ಒಂದು ಕಿಕ್ಕು
ತರಾತುರಿಯಲ್ಲೇ ಮಾಡಿ ಮುಗಿಸಿ ನಕ್ಕು
ಕುಂತ ಏಕೆಂದು ತಿಳಿಯಿತೆ ಲಾಜಿಕ್ಕು
ಅಲ್ಪ ಸಂಖ್ಯಾತರು, ಹಿಂದುಳಿದವರು
ದಲಿತರು ಇವರೆಲ್ಲಾ ಒಂದುಗೂಡಿದರೆ
ಎಲ್ಲರಿಗೆ ಇದರ ಬಲ ಪ್ರದರ್ಶಿಸಿದರೆ
ಬಹು ಸಂಖ್ಯಾತರಿವರೆಂದು ಗೊತ್ತಾದರೆ
ಇವರು ಬೀದಿ ಬೀದಿಗಳಲ್ಲಿ ಸಂಘಟಿಸಿದರೆ
ಬರುವ ಚುನಾವಣೆಯಲಿ ಕಣಕ್ಕಿಳಿದರೆ
ಮುಂದೆ ರಾಜ್ಯವನಾಳುವ ದೊರೆಗಳಾದರೆ
ಆಗ ಆಗುವುದಿಲ್ಲವೇ ಗೌಡರಿಗೆ ಶಾಕು
ಇವರ ಒಳಮೀಸಲಾತಿಯ ತಂತ್ರ
ಎಲ್ಲರಿಗೂ ಆಗುತ್ತೆ ಬಹಳ ಖತ್ರಾ
ಒಂದೇ ಒಂದು ಹೊಡೆತಕ್ಕೆ ಸಿಕ್ಕಿ
ಅಬ್ಬಾ! ಎಷ್ಟೊಂದು ಉರುಳಿದವು ಹಕ್ಕಿ
ಬಹು ಪರಾಕ್ ಬಹು ಪರಾಕ್ ಗೌಡಣ್ಣಾ
ಇಲ್ಲಿಗಂಟಾ ಚಳ್ಳೆ ಹಣ್ಣು ತಿನ್ನಿಸಿದ್ದು ಸಾಕಣ್ಣಾ
ಇಲ್ಲಿ ಪ್ರತಿ ಪ್ರಜೆಗೂ ಆತ್ಮ ಗೌರವ ಬೇಕಣ್ಣಾ
ಈಗಲಾದರೂ ಈ ಸತ್ಯ ಖಂಡಿತಾ ತಿಳಿಯಣ್ಣಾ
ಹಲವು ದಶಕಗಳಿಂದ ನಿಮ್ಮದೇ ದರಬಾರು
ಮುಂದೆಯೂ ನೀವೇನಾ ನಮ್ಮ ಸರದಾರರು
ದನಿಯೆತ್ತಿದರೆ ಸಾಕು ಎಸೆವರು ಬಿಸಕತ್ತು
ಇಲ್ಲವೇ ಅಹಿಂದ ನಿನಗೆ ತಡೆವ ತಾಕತ್ತು
ಅತ್ತಿತ್ತ ನೋಡಾ ನಮಗೆ ಬಿಸಕತ್ತು ಬೇಡಾ
ಮಾಯಾವತಿಯ ಮಾಯೆ ಯಾರಿಗೆ ಬೇಡಾ
ಮಾಡಿ ಸಂಘಟನೆಯ ಕೇರಿ ಕೇರಿಗಳಲ್ಲಿ
ಹಾಡಿ ಒಕ್ಕೊರಳಲ್ಲಿ ಅಹಿಂದ ಒಗ್ಗೂಡಿ
ಒಗ್ಗಟ್ಟಿನ ಮಂತ್ರದಿ ಬಿಕ್ಕಟ್ಟಿನಲಿ ಕುಣಿವೆ
ಕುತಂತ್ರಗಳಿಗೆ ನೀ ಏಕೆ ತಲೆಬಾಗುವೆ
ಹೆಮ್ಮೆಯಲಿ ತಲೆಯೆತ್ತಿ ಸರೀಕರಲಿ ನೀನು
ಸಮ ಸಮಾಜ ನಿರ್ಮಾಣಕೆ ಇಟ್ಟು ಹೆಜ್ಜೆಯನು
No comments:
Post a Comment