ಪಶ್ಶಿಮ ಬಂಗಾಳದಲಿ ಕೋಳಿ ಜ್ವರ
ಲಕ್ಷಾಂತರ ಕೋಳಿಗಳ ಜೀವ ಹರಹರ
ಇನ್ನು ಮೊಟ್ಟೆಗಳ ಉಳಿಸುವರೆ ಶಂಕರ
ಹರಹರ, ಶಂಕರ, ಇದು ಕೋಳಿ ಜ್ವರ
ಕೋಳಿ ಫಾರಂ ಮಾಲೀಕರ ನಷ್ಟ ಅಪಾರ
ಕೇಳುವರಾರು ಕೆಲಸಮಾಡುವ ಕೂಲಿ ಕಾರ್ಮಿಕರ
ಕೋಳಿ ತಿನ್ನುವ ಮಂದಿ ಮಂಕಾಗಿ ಕುಂತಾರ
ಶಟಲ್ ಅಡುವವರಿಗೆ ಶಟಲ್ ಕಾಕ್ ಗಳ ಬರ
ಇದರಲ್ಲೇನು ವಿಶೇಷ ಅಂತ ನೀವಂತೀರಾ
ಹರಹರ, ಶಂಕರ, ಇದು ಕೋಳಿ ಜ್ವರ
ತಿನ್ನುವವರಿಗೆ ಜ್ವರ, ಕೂಲಿ ಕಾರ್ಮಿಕರಿಗೆ ಜ್ವರ
ಮಾಲೀಕರಿಗೆ ಜ್ವರ, ಶಟಲ್ ಆಡುವವರಿಗೆ ಜ್ವರ
ಆಡಳಿತಕ್ಕೆ ಜ್ವರ, ರಾಜ್ಯ ಸರ್ಕಾರಕ್ಕೆ ಜ್ವರ
ಹೊರ ರಾಜ್ಯಗಳಿಗೆ ಬಂದೀತೆಂಬ ಭಯದಿ ಜ್ವರ
ಕೇಂದ್ರ ಸರ್ಕಾರಕ್ಕೆ ಬಹಳ ಬೇಸರ, ದೂರದ
ಅಮೇರಿಕಾ ದೇಶದ ಸಹಾಯಾಸ್ತಕ್ಕೆ ನಕಾರ
ಕೋಳಿ ಜ್ವರಕ್ಕೆ ಈ ಪರಿ ಹಾಹಾಕಾರ
ನಾಳೆ ಹೀಗೆ ಬಂದರೆ ನರರ ಜ್ವರ
ಮಾಡಲೂ ಬಹುದು ಎಲ್ಲರ ಸಂಹಾರ
ಮಾಡುವುದಾದರೂ ಏನು ಸರಕಾರ
ಅಸಹಾಯಕತೆಯಲಿ ಮನೆಯವರು
ಮೂಕ ಪ್ರೇಕ್ಷಕರಾಗಿ ನಮ್ಮ ಆಪ್ತರು
ಇರದಿರಬಹುದು ಕಣ್ಣೀರು ಒರೆಸುವವರು
ಎಂದಿಗೂ ಬಾರದಿರಲಿ ನರರ ಜ್ವರ ನರಹರ
ಪರಿಸರದ ವಿನಾಶ ಮನುಕುಲದ ಸಶೇಷ
ಸಾತ್ವಿಕ ಜೀವನದಿ ಎಲ್ಲರಿಗೂ ಸಂತೋಷ
ಮುಂದೆ ಸಾಗದಿರು ಮತ್ತೆ ಬಾರದೆಡೆಗೆ
ಮರಳಿ ಬಾ ಶಂಕರ ಮತ್ತೆ ಪ್ರಕೃತಿಯಡೆಗೆ
1 comment:
good one!!
sree
Post a Comment