ಏನೀ ಬೇಸರ, ನಿನಗೆ ಏಕೀ ಕಾತುರ
ಯಾವ ಅವಸರಕೆ ನಿನ್ನ ಈ ತರವು
ಒಣಗಿ ಬೆಂಡಾಗಿ, ಕಾಲ ಚೆಂಡಾಗಿ
ತೂರಿ, ಹಾರಿ, ತೇಲಿ, ನೀ ಮುಳುಗಿ
ನೂರೈವತ್ತು ನೀ ಕಂಡಿರುವ ಕುತ್ತು
ಸಾವಿರದ ಐವತ್ತು ಉಳಿದ ಆಪತ್ತು
ಇರುವ, ಇರದವುಗಳಲಿ ಜಾರಿಬಿದ್ದು
ಎಂದು ಬರುವೆಯೋ ನೀ ಮೇಲೆದ್ದು
ಒಳ ಹೊರಗೆ ನಿಲ್ಲದಿಹ ಹೋರಾಟ
ಹೆಜ್ಜೆ ಹೆಜ್ಜೆಗೂ ದಣಿದು ಪರದಾಟ
ಎಟುಕದ ಕಲ್ಪನೆಗಳ ಹುಡುಕಾಟ
ಬೇಡದ ಬೇಡಿಕೆಯು ಕೊಡುವ ಕಾಟ
ಯಾವ ಭ್ರಾಂತಿಗೆ ನೀ ಬೆರಗಾದೆ
ಯಾರ ಮಂತ್ರಕೆ ನೀ ಮರುಳಾದೆ
ಯಾವ ಶಕ್ತಿಗೆ ನಿನ್ನ ನೀ ಮರೆತೆ
ಯಾವುದಯ್ಯಾ ನಿನಗಿರುವ ಕೊರತೆ
ಎಲ್ಲಿ ಹುಡುಕುವೆ ಸಿಗದ ಸಂತಸವ
ನಿನ್ನೊಳಗೆ ಅವನಡಗಿ ಕುಳಿತಿರುವ
ಕಳೆದುಕೊಂಡ ನಿನ್ನೆ, ಸಿಗದ ನಾಳೆ
ಇರುವ ಈ ದಿನವೇ ನಮಗೆ ನಿಜವು
No comments:
Post a Comment