ಮನುಜನಿಗೆ ಮೊದಲ ಶತ್ರು
ಅವನ ಬುದ್ದಿಶಕ್ತಿ ಅಲ್ಲವೇನು
ಒಮ್ಮೆ ಪುಟವ ಹಿಂದಿರುಗಿಸಿ
ಕಾಣೋ ಸ್ಪಷ್ಟ ಚಿತ್ರವನು
ಸಿಕ್ಕ ಎಲೆಗಳನು ಸುತ್ತಿಕೋ
ನಿದ್ದೆ ಬಂದಕಡೆ ಮಲಗಿಕೋ
ಹಸಿವಿಗಿರಲು ಗೆಡ್ಡೆ ಗೆಣಸು
ಯಾರಲಿಲ್ಲ ಇರಿಸು ಮುರಿಸು
ಊಹಿಸಿಕೋ ಕ್ಷಣಕೆ ನೀನು
ಜೀವರಾಶಿಗಳಲಿ ಒಬ್ಬನು
ಸ್ಪರ್ಧಾಯುಗಕೆ ಸೋಡಾಚೀಟಿ
ಸೀಟಿ ಹೊಡೆಯೋ ಪೋರನು
ಯಾವ ನೆಲೆ ಯಾವ ಸೆಲೆ
ಯಾರ ಹಂಗು ಯಾರು ದಿಕ್ಕು
ಏಕೆ ಬೇಕು ಅಂಕು ಡೊಂಕು
ಆಸೆಗಳ ಆಚೆಗೆ ಎಂಥ ಕಿಕ್ಕು
ಯಾವ ಧರ್ಮ ಯಾರ ಕರ್ಮ
ಜಾತಿ ಮತಗಳೆಲ್ಲ ಭಸ್ಮ
ನಮಗೆ ಏಕೆ ಸಿರಿ ಬೇಕೆ ಗುರಿ
ಸೋಲು ಗೆಲುವುಗಳ ಪರಾರಿ
ವೇದ ಉಪನಿಶತ್ತುಗಳಿಲ್ಲ
ವಿಜ್ಞಾನ ತಂತ್ರಜ್ಞಾನಗಳಿಲ್ಲ
ಸಾಹಿತ್ಯ ಸರಂಜಾಮುಗಳಿಲ್ಲ
ಆಹಾ!! ಭುವಿಯೇ ನಾಕವು
No comments:
Post a Comment