ಸಾಹಿತ್ಯದ ಸಾಗರಕೆ ನಾನು
ಪ್ರಯತ್ನವೆಂಬ ಗಾಳವೆಸೆದು
ಆಸಕ್ತಿಗೆ ಎರೆಹುಳದ ಹೆಸರು
ಕೊಕ್ಕಿಗೆ ಸಿಕ್ಸಿ ಬೀಸಲೊಮ್ಮೆ
ಅಲೆಗಳ ಪರದೆ ನುಸುಳಿ ಸೀಳಿ
ಒಳ ಹೊಕ್ಕ ಗಾಳ ದಿಗ್ಭ್ರಮೆಗೆ
ತೆರೆಯಿತದಕೆ ಹೊಸ ದಿಗಂತ
ತರ ತರದ ವರ್ಗ ಗರ್ಭದಲಿ
ಆಶ್ಚರ್ಯ ಚಕಿತ ಚಕೋರರಿಲ್ಲಿ
ಕಚಗುಳಿಯನಿಡುವ ತವಕದಲಿ
ಗುರುತು ಸಿಗದ ಬನಗಲೆಷ್ಟು
ಬಗೆ ಬಗೆಯ ಬಣ್ಣಗಳ ಹೊತ್ತು
ಮುಗಿಯದ ಅಧ್ಯಾಯಗಳನು
ಪುಟ ತಿರುಗಿಸುವ ಕುತೂಹಲದಿ
ಮೊದಲಿನಿಂದ ಕೊನೆಯ ಪುಟಕೆ
ನಿಗೂಢನಿರತ ಕಂದರ ನಿರಂತರ
ಅನಂತಾನಂತವಿದರ ವಿಸ್ತಾರ
ಎಂಥ ರುಚಿಯೋ ಇದರ ಸಾರ
ಆಳ ಹಗಲ ಕಾಣೆ ನೀ ತಲಾ ತಳ
ಹೊಕ್ಕಿ ಬರುವೆ ನನಗಾಗ ನಿರಾಳ
No comments:
Post a Comment