ನಾ ಕಂಡ ಕನಸುಗಳು
ನನ್ನ ಅಂತರಂಗದಲಿ
ಬಿಗಿಯಾಗಿ ಹಿಡಿದಿಟ್ಟ
ಅಭಿವ್ಯಕ್ತ ರಹಿತ ಭಾವಗಳು
ಗುರುತಿಸಲಾಗದೆ ಮುಚ್ಚಿ
ಮರೆಯಾದ ಹೆಜ್ಜೆಗಳು
ಹಾಡಲಾಗದ ರಾಗಗಳು
ನಾ ಕಂಡ ಕನಸುಗಳು
ನೆನಪಿಗೆ ಬಾರದೆ
ಹಾರುವ ಕವಿತೆಗಳು
ಬದಲಾಗುವ ಬಣ್ಣಗಳು
ನಾ ಕಂಡ ಕನಸುಗಳು
ನನ್ನ ಕಲ್ಪನೆಗೆ ಕಣ್ಣು
ಹೊಡೆಯುವ ಚಿಟ್ಟೆಗಳು
ನೆರಳಿರದ ಮರಗಳು
ನಾ ಕಂಡ ಕನಸುಗಳು
ಯಾವ ದೇವರ ಪೂಜೆಗೆ
ಯಾವ ಚೆಲುವೆಯ ಮುಡಿಗೆ
ಕಾತುರದಿ ಕಾದಿರುವ ಪುಷ್ಪಗಳು
ನಾ ಕಂಡ ಕನಸುಗಳು
No comments:
Post a Comment