Feb 19, 2008

ನೆವವನ್ನೇ

ಏಕಾಂತದಲೀ ಕಾಂತನ ನೆನಪು ಬಾರದೇ ನಲ್ಲೆ
ನೀರೂರಿಸುವಾ ನಿನ್ನ ಕೆಂದುಟಿಯು ರಸಬಾಳೆ

ನಾಳೆ ನಾಳೆಯೆನುತ ಭಯ ತರವೇ ಭಾಮಿನಿ
ಕಳೆದ ಮಧುರ ಕ್ಷಣ ಮತ್ತೆ ನೆನಪಾಗಿ ಮೋಹಿನಿ

ದಾರಿ ದೂರಾಗಿ, ಒಂದು ಎರಡಾಗಿ ಮತ್ತದೇ
ಗೊಂದಲದಲಿ ಎನ್ನೆಸೆಯ ಬೇಡವೇ ನವಿಲೇ

ಬಾಳು ಬೃಂದಾವನವು, ಮನ ಹೊಳೆವ ಹೂವು
ಬರಡಾಗದಿರಲಿ ಬದುಕು, ಬಾಡದಿರಲೀ ಮನವು

ಯೋಗಿ, ಕಿಂದರ ಜೋಗಿ, ನಿನ್ನೊಲವಿಗೆ ನಾ ಮಾಗಿ
ನಿನ್ನ ಎದೆಯಾಳದಲಿ ತೇಲಿ ಮುಳುಗುವಾ ಮೀನಾಗಿ

ಕಲ್ಪವೃಕ್ಷವು ನಾನಾಗಿ ನಿನ್ನ ಬಯಕೆಗಳ ಬತ್ತಿಸುವೆ
ಕವಿದ ಕತ್ತಲನ್ನೋಡಿಸುವ ಬೆಳಕಾಗಿ ನಾ ಬರುವೆ

ಜಾರದಿರು ಮನದನ್ನೆ ಮಾಡುತಾ ನೀ ಕಣ್ಸನ್ನೆ
ಕೈಯನಿಡಿಯಲು ಬಂದಾಗ ನಿನ್ನೆ ಹೇಳಿದ ನೆವವನ್ನೇ

No comments: