ಆ ಚುಕ್ಕಿಗೂ, ಈ ಚುಕ್ಕಿಗೂ
ನಡುವೆ ಏನೀ ಅಂತರ ...
ದೈತ್ಯನಾಗಿ ಬೆಳೆವ ಕಾತುರ
ಕವಲೊಡೆದು ನಿಂತಿಹ ಕಂದರ
ಬಾಳ ಬಿಗುವಿನ ಬಿಂಕದಿಂದ
ಜನನವಿದಕೆ ಅನಿವಾರ್ಯವು
ಕಳಂಕವನ್ನೇ ಕಳಶವಾಗಿಸಿ
ಕಾಣಸಿಗದಿಹ ಚಾತುರ್ಯವೋ
ತಿಳಿಯದಾಗಿದೆ ಈ ಅಗೋಚರ
ನಿಲ್ಲದೇಕಿದೂ ನಿರಂತರ
ತೂಗು ದೀಪವೊ, ದಾರಿ ದೀಪವೊ
ನೆತ್ತಿ ಮೇಲಿನ ತೂಗು ಕತ್ತಿಯೊ
ನವ ದಿಗಂತಕೆ ನಾಂದಿ ಹಾಡುತ
ಇರುವ ಇರದುದನೆಲ್ಲ ಕೆದಕುತ
ಉರಿವಬೆಂಕಿಗೆ ತೈಲವೆರೆಯುತಾ
ನಗುವೆ ಏಕೇ ನೀನು ಸತತ
ಚುಕ್ಕಿ, ಚುಕ್ಕಿಗೂ ಖಚಿತವಂತರ
ಚೆಲುವಿನ ಚಿತ್ತಾರ ಪರಿಸರ
ನೆಟ್ಟ ನೋಟಕೆ ತರವೆ ಬೇಸರ
ನಿಜವನರಿಯೋ ದಿನವು ಸುಂದರ
No comments:
Post a Comment