Feb 21, 2008

ಅಂತರ್ಜಾಲ

ಅಂತರ್ಜಾಲ ಶಿವಾ ಇದು ಮಾಯಾಜಾಲ
ಮಾಹಿತಿ ತಂತ್ರಜ್ಞಾನ ನಮಗೆ ತಂದ ಬಲ
ಬೇಕು ಬೇಡದ ವಿಷಯಗಳಿಗಿಟ್ಟು ಬಾಲ
ಎಲ್ಲೆಡೆಯು ಕುಣಿಯುತಿದೆ ಚಾಂಗು ಭಲ

ಒಮ್ಮೆ ಇಟ್ಟರೆ ಲಗ್ಗೆ, ಮತ್ತೆ ಬರುವರು ಜಗ್ಗಿ
ತಲೆಗೆ ಹುಳ ಹೊಕ್ಕಂತೆ ಕಾಡುವುದು ನಮಗೆ
ಯಾವುದೇ ಮಾಹಿತಿ ಎಲ್ಲಿಯೇ ಅಡಗಿರಲಿ
ಶ್ವಾನ ಗ್ರಹಣದ ಶಕ್ತಿಗೆ ಬರಲು ಉರುಳುರುಳಿ

ಸರ್ವಾನ್ತರ್ಯಾಮಿ ಶಿವ ಮುಖದ ಕಣ್ಣವನು
ಸಕಲ ಕುಲ, ನೆಲ, ಜಲದ ರುಚಿಯುಂಡವನು
ಕಾಲಗರ್ಭದಲಿ ಆಗಾಗ ಮಿಂದು ಬರುವನು
ನಿನ್ನೆ, ಇಂದು, ನಾಳೆ ನಾಳೆಗಳ ಲೆಕ್ಕಿಸನು

ಮನಸಿನಾ ವೇಗಕೆ ಧೂತ ಇವನೇನು
ಕ್ಷಣದಲಿ ಕಣ್ಮುಂದೆ ಪ್ರತ್ಯಕ್ಷವಾಗುವನು
ದೇಶ ವಿದೇಶಗಳನು ತೂರಿ ಬರುವವನು
ಬೇಕಾದ ವಿಷಯಗಳ ಆಯ್ದು ಬಡಿಸುವನು

ನಮ್ಮ ಸಂದೇಶಗಳ ಬಹುಬೇಗ ತರುವನು
ಇರುವ ಸಂದೇಹಗಳಿಗೆ ಉತ್ತರಿಸುವವನು
ಇಡೀ ವಿಶ್ವವನು ಒಂದುಗೂಡಿಸುವವನು
ಅಲ್ಲಲ್ಲಿ ಚದುರಿರುವ ಹಕ್ಕಿಗಳಿಗೆಲ್ಲ ಸಂತನು

ಮಾನವನಾಗುವವ ದೇವ ದಾನವನು
ದೇವ ಒಲಿತನು ದಾನವ ವಿನಾಶವನು
ನಮಗಿಟ್ಟು ಇದ ಬಳಸುವ ಆಯ್ಕೆಯನು
ಬಯಸದೇ ಯಾರಿಗೂ ಕಿಂಚಿತ್ತು ಕೇಡನು

ಬಲ್ಲವರೇ ನನ್ನ ಕರೆ ಒಸಿ ಕೇಳಿರೋ
ಭಾವಗಳ ಗಾಳಿಪಟವಾಗಿ ಹಾರಿ ಬಿಡಿರೋ
ಅಕ್ಕ ಪಕ್ಕದವರನ್ನೆಲ್ಲಾ ಇಲ್ಲಿ ಕರೆತನ್ನಿರೋ
ರುಚಿಕೊಟ್ಟು ಹುಳಬಿಟ್ಟು ಕುಣಿದಾಡಿರೋ

No comments: