ಎಲ್ಲಿಂದಲೋ ಬಂದವನು
ಏಕೆಂದು ನಾ ಅರಿಯೆನು
ಎಲ್ಲಿಗೆ ಹೊರಟಿರುವೆನು
ಎಲ್ಲಿರುವೆನೆಂದು ತಿಳಿಯೆನು
ಯಾರ ಕರುಳ ಕುಡಿಯೆಂದು
ಬಲ್ಲವನು ನಾನು, ಈ ಆಯ್ಕೆ
ನನ್ನದು, ಅವರದ್ದು ಅಗಿರಲ್ಲಿಲ್ಲ
ಆಕಸ್ಮಿಕವೋ, ದೈವದತ್ತವೋ
ಪ್ರೀತಿ, ವಾತ್ಸಲ್ಯಕ್ಕೆ ಸೋತು
ಅವರ ನಾನು ಒಪ್ಪಲಿಲ್ಲ
ಇವರ ಕುಡಿ ನಾನೆಂದು
ಹೆಮ್ಮೆ ಪಟ್ಟದ್ದು ಸುಳ್ಳಲ್ಲ
ಅಗಾಧ ಪ್ರೀತಿಗೆ ಧನ್ಯತೆ
ನಿಸ್ವಾರ್ಥ ಸೇವೆಗೆ ಅರ್ಹತೆ
ಸ್ವಾಭಾವಿಕ ಬೆಳೆದ ಪೂಜ್ಯತೆ
ಅವರಿಗೆ ಯಾವ ಅನಿವಾರ್ಯತೆ
ದಿನ ನಿತ್ಯ ನನ್ನದೇ ಚಿಂತೆ
ಬೇಕು ಬೇಡಗಳನ್ನೊತ್ತು ಜಗಳ
ಆಸೆಗಳೀಡೇರಿಸುವ ಚಪಲ
ಏನು ಅವರಿಗಿರುವ ಕೊರತೆ
ಎಲ್ಲ ನೋವುಗಳ ನುಂಗುವರು
ಇವರು ಯಾವ ತ್ಯಾಗಕ್ಕೂ ಸಿದ್ದರು
ನಿರೀಕ್ಷೆಗೆ ಸ್ಪಂದಿಸಿದರೆ ಆನಂದಿಸುವರು
ಹುಸಿಯಾದರೆ ಒಳಗೊಳಗೆ ಕುಗ್ಗುವರು
ಭರವಸೆಗಳನ್ನೇಕೆ ಬಿತ್ತಿಹರು
ಚದುರಂಗದಾಟದಲಿ ಬಳಸುತಿಹರೆ
ಚಕ್ರವ್ಯೂಹದಲಿ ಸಿಲುಕಿಸಿರುವರೆ
ಅಸಹಾಯಕತೆಯಿಂದೇಗೆ ಹೊರಬರಲಿ
ಆಶಯಗಳ ತಳಪಾಯ ನಾನಾಗಲೇ
ನನ್ನ ಆಶಯಗಳ ಬಗ್ಗೆ ತಿಳಿಹೇಳಲೇ
ಕನಸುಗಳ ನನಸಾಗಿಸಲೆತ್ನಿಸಲೇ
ನನ್ನ ಕನಸುಗಳನ್ನೊಮ್ಮೆ ಪರಿಚಯಿಸಲೇ
ಇರುವಿಗೆ ಭರವಸೆ ನಾ ನೀಡಲೆ
ಇರುಳಲ್ಲಿ ನೆರಳಿಗೆ ಹುಡುಕಾಡಲೆ
ಬಾಡಿದ ಹೂಗಳಿಗೆ ಬೆಳಕಾಗಲೆ
ಮಾಗಿದ ಹಣ್ಣುಗಳಿಗೆ ಬದುಕಾಗಲೆ
ಇತ್ತ ಬಿಡಲಾರೆ ಮುಂದೆ ಹೋಗಲಾರೆ
ಜೊತೆ ಜೊತೆಗೆ ಸಾಗಿ ಸಾಧಿಸಲಾರೆ
ಧನ್ಯತೆಗೆ ತಲೆಬಾಗಿ ನಿಟ್ಟುಸಿರಿಡಲೆ
ಕ್ಷಣದಲಿ ಮರೆತು ಎದ್ದು ಹೊರಟುಬಿಡಲೆ
ಸರಿದೂಗಿಸುವ ಸಾಧ್ಯತೆಯಿರದಾಗ
ಮರೆಯಲೆತ್ನಿಸಿ ಮರೆಯಲಾದಾಗ
ಹತ್ತಿರವಿದ್ದರೂ ದೂರವಾದಾಗ
ನನ್ನ ನಾ ದ್ವೇಷಿಸಲು ಶುರು ಆಗ
ಪರಿಸ್ಥಿತಿಯನರಿತು ಮಾಡಿರುವೆ ನಿರ್ಧಾರ
ಜನ್ಮವಿತ್ತವರು ನನ್ನದೆಲ್ಲದಕೂ ಮಾಲೀಕರು
ಕೊನೆವರೆಗೂ ನಾ ಇರುವೆ ಇವರ ಹತ್ತಿರ
ಕಂಡುಕೊಳ್ಳುವೆ ಇಲ್ಲೇ ಕಳೆದುಕೊಂಡಿರುವುದರ
No comments:
Post a Comment