ಭಾರತ ಅಮೇರಿಕ ಅಣು ಒಪ್ಪಂದ
ಇದುವೇ ಒನ್ ಟು ತ್ರೀ ಅಗ್ರಿಮೆಂಟ್
ಸರ್ಕಾರ ಕೊಟ್ಟರೆ ಗ್ರೀನ್ ಸಿಗ್ನಲ್
ಒಪ್ಪಂದವಾಗುವುದು ಕಾನೂನು ಬದ್ಧ
ಅಣುಸ್ಥಾವರ ಸ್ಥಾಪನೆ ಅಲ್ಲಲ್ಲಿ ಹರಡಿ
ಅಮೇರಿಕ ಅಣುತೈಲ ನಮ್ಮಲ್ಲಿ ಬರಲು
ಅಣುಶಕ್ತಿ ಉತ್ಪಾದನೆ ನಮಗಲ್ಲಿ ಇರಲು
ನಾಗರಿಕ ಬಳಕೆಗಾಗಿ ಮಾಡಿ ತಯಾರಿ
ಕೇವಲ ಶೇಕಡಾವಾರು ಆರರಷ್ಟು
ದೇಶದ ಶಕ್ತಿ ಬೇಡಿಕೆ ಪೂರೈಸುವ
ಈ ಸಲುವಾಗಿ ಲೆಪ್ಟ್ ರೈಟ್ ಕಾದಾಟ
ರಾಯಭಾರಿಗಳ, ಮಂತ್ರಿಗಳ ಪರದಾಟ
ಬುದ್ದಿಜೀವಿಗಳ ಸಲಹೆ ಬೇಕಾಗಿಲ್ಲ
ಮಾದ್ಯಮಗಳ ತರಾಟೆ ಪರವಾಗಿಲ್ಲ
ಪ್ರತಿಪಕ್ಷಗಳ ಕಿರುಚಾಟಕ್ಕೆ ತಲೆಬಾಗಲ್ಲ
ಯಾರ ಮಾತಿಗೂ ನಾನು ಜಗ್ಗುವವನಲ್ಲ
ಮಾನ್ಯ ಪ್ರಧಾನ ಮಂತ್ರಿಗಳ ಧೃಢ ನಿರ್ಧಾರ
ಇದು ಸಮಸ್ಯೆಗೆ ಏಕೈಕ ಪರಿಹಾರ ಅಂತಾರ
ದೇಶದ ಪ್ರಗತಿಗೆ ಮೂಲ ಅಂತ ತಿಳಿದಾರ
ಅಮೇರಿಕಾ ದೇಶದ ರಾಯಭಾರಿ ಹಂಗಾಡ್ತಾರ
ದೇಶದ ಭದ್ರತೆಗೆ ಅಣು ಪರೀಕ್ಷೆ ಮಾಡಿದರ
ಖಾಯಂಹಾಗಿ ತೈಲ ಪೂರೈಕೆಗೆ ತಡೆ ಅಂತಾರ
ಭದ್ರತೆ ಮುಖ್ಯವೋ, ಅಣುಶಕ್ತಿ ಮುಖ್ಯವೋ
ಈ ಪ್ರಶ್ನೆಗೆ ಕೊಡಬೇಕು ಅವರೇ ಉತ್ತರ
ಅತಿ ಹೆಚ್ಚು ದ್ವೇಷಿಸುವ ದೇಶ ಅಮೇರಿಕಾ
ಇದಕೆ ನೆಂಟರು ಎಜೆಂಟರು ನಾವಾಗಬೇಕಾ
ಇದು ಮಾಡುವ ಚೇಸ್ಟೆಗಳಿಗೆ ತಲೆತೂಗಬೇಕಾ
ಇತರ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಬೇಕಾ
ಇವರೊಡನೆ ಅಣುಬಾಂಬ್ ಬಹಳ ಸುರಕ್ಷಿತ
ಅನ್ಯ ದೇಶಗಳೊಂದಿದರೆ ಬಾರೀ ದುರಂತ
ಎಲ್ಲಾ ರಾಷ್ಟ್ರಗಳು ಇದನು ಒಪ್ಪ ಬೇಕಂತಾ
ಆಗಲೇ ಪ್ರಪಂಚದಲಿ ಶಾಂತಿ, ನೆಮ್ಮದಿ ಅಂತಾ
ಹಿರೊಶಿಮಾ, ನಾಗಾಸಾಕಿ,ಕ್ಯೂಬಾ ಭೂತ ಯಾರಂತ
ಭೂಪಾಲದಲಿ ಅನಿಲ ಸೋರಿಕೆಗೆ ಕಾರಣ ಬೇಕಂತ
ಇರಾಕ್, ಪ್ಯಾಲೆಸ್ತೀನ್, ಆಫ್ಘಾನಿಸ್ಥಾನ್ ಯುದ್ದ ಯಾಕಂತ
ಇವರ ಗಿಳಿಪಾಠ ಕೇಳಿದರೆ ನಮ್ಮ ಕಿವಿ ತೂತ
ಭಯೋತ್ಪಾದನೆಯ ಸೃಷ್ಟಿ ಇವರದಲ್ಲವೇ
ಪಾಕೀಸ್ತಾನಕ್ಕೆ ದೊಡ್ಡಣ್ಣ ಇವನಲ್ಲವೇ
ಮದ್ದು ಗುಂಡುಗಳ ಒಡೆಯ ಇದಲ್ಲವೇ
ಅಮೇರಿಕಾ ನಂಬಲು ನಮಗೆ ಸಾಧ್ಯವೇ
ಜಾಗತೀಕರಣ, ಉದಾರೀಕರಣ,
ಖಾಸಗೀಕರಣ, ಸರಳೀಕರಣ,
ಗ್ರಾಹಕೀಕರಣ, ನಗರೀಕರಣ
ಭೂತಗಳ ಸೃಷ್ಟಿಗೆ ಇವ ಕಾರಣ
ಭಯೋತ್ಪಾದನೆಯು ಕೊಡುವ ನೋವಿಗಿಂತ
ಈ ಭೂತಗಳ ಸೃಷ್ಟಿಸುವ ಕಾಯಿಲೆಗಳು ಅಪಾರ
ನಗರದಲಿ ಪರಿಣಾಮ ಅಗಾಧವಾಗಿದೆ ಇದರ
ಸಿಗದಾಗಿದೆ ಯಾರಿಗೂ ಇದಕೆ ಪರಿಹಾರ
ಪ್ರಸಕ್ತ ವಿದ್ಯಮಾನಗಳೇ ಇದರ ಪ್ರತಿರೂಪ
ನಗರವಾಸಿಗರ ಮನಸ್ಥಿತಿಯೇ ಇದಕೆ ಪ್ರತಿಬಿಂಬ
ಹುಚ್ಚು ಸ್ಪರ್ಧೆಯಲಿ ಕೊಚ್ಚಿ ಹೋಗುವ ರೀತಿ
ಬೇಕಿತ್ತೇ ವಿದ್ಯಾವಂತರಿಗೆ ಇಂಥಾ ಪಜೀತಿ
ಬೇಕೇ ನಮಗೆ ಒಂದೇ ಭಾಷೆ, ಒಂದೇ ಸಂಸ್ಕೃತಿ,
ಒಂದೇ ಮನೋರಂಜನೆ, ಒಂದೇ ಆಹಾರ ಪದ್ದತಿ,
ಒಂದೇ ಜೀವನ ವಿಧಾನ, ಒಂದೇ ತಂತ್ರಜ್ಞಾನ
ನಮ್ಮ ಭಾಷೆ, ಸಂಸ್ಕೃತಿ, ವೈವಿಧ್ಯತೆ ಮರೆತು
ಪ್ರಗತಿಯ ಜೊತೆಗೆ ನೆಮ್ಮದಿಯು ಬೇಕು
ಹಣಗಳಿಕೆಯೊಂದಿಗೆ ಆರೋಗ್ಯವಿರಬೇಕು
ವಸ್ತು ವ್ಯಾಮೋಹ ತೊರೆದು ಜನ ಪ್ರೀತಿ ಬೇಕು
ಎಲ್ಲ ಸರಿದೂಗಿಸುವ ಜಾಣರು ನಾವಾಗಬೇಕು
ಸಮಾಜದ ಎಲ್ಲಾ ಸ್ಥರಗಳ ನಾವು ತಲುಪಬೇಕು
ಪ್ರಗತಿಯ ಪ್ರತಿಫಲವ ಎಲ್ಲರೂ ಸವಿಯಬೇಕು
ಸಮ ಸಮಾಜ ನಿರ್ಮಾಣ ಮಂತ್ರ ಜಪಿಸಬೇಕು
ಸರ್ವರೂ ಸಂತಸದ ಬದುಕು ಕಾಣಬೇಕು
No comments:
Post a Comment