ಭಾವಗಳು ಹಸಿಯಾಗಿ
ನವಿರಾದ ಚಿಗುರಾಗಿ
ಎಳೆತಾದ ಕಾಯಾಗಿ
ಒಗರಿರುವ ರುಚಿಯಾಗಿ
ಮಸುಕು ಮಸುಕಾಗಿ
ಕರಗದೆ ಬಹುವಾಗಿ
ಬಯಸದೆ ತೀವ್ರವಾಗಿ
ಹಾಗೆ ನಿರಾಳವಾಗಿ
ಭಾವನೆಗೆ ಬಣ್ಣಗಳ
ಸೆಳೆವ ಮಾತುಗಳ
ಹತ್ತು ಸನ್ನಿವೇಶಗಳ
ಹೊತ್ತು ಅಂತರಾಳ
ಆಳವಾದ ಅಧ್ಯಯನ
ವಿಭಿನ್ನ ದೃಷ್ಟಿಕೋನ
ಅನುಭವದ ಹಿನ್ನಲೆ
ಅಗಾಧ ಅರಿವಿನಲಿ
ನಿಯಂತ್ರಿತ ಚಾಲನೆ
ಕ್ರಿಯಾಶೀಲ ಚಿಂತನೆ
ಪ್ರಜ್ಞಾವಂತಿಕೆಯ ಕೆನೆ
ಅಭಿವ್ಯಕ್ತಿಯೆ ಸಾಧನೆ
ಹಲವಾರು ಆಯಾಮ
ಎಲ್ಲದರ ಸಮಾಗಮ
ಕಾಯುವ ಸಂಯಮ
ಪ್ರಬುದ್ಧ ಕೃತಿಗೆ ಜನ್ಮ
No comments:
Post a Comment